ಶುಧ್ಧಿ ಆದರ್ಶ್ ಈಶ್ವರಪ್ಪ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ನಿವೇದಿತಾ, ಲಾರೆನ್ ಸ್ಪಾರ್ಟಾನೋ ಮತ್ತು ಅಮೃತ ಕರಾಗಾಡ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಶಶಾಂಕ್ ಪುರುಷೋತ್ತಮ್ ಮತ್ತು ಸಿದ್ಧಾರ್ಥ ಮಾದಯಾಮಿಕ ನಟಿಸಿದ್ದಾರೆ. ಭಾರತೀಯ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಚಿತ್ರದ ಕಥಾವಸ್ತು. 3 ಫೆಬ್ರವರಿ 2017ಕ್ಕೆ ಬಿಡುಗಡೆಯಾದ ಚಿತ್ರದ​ ಟ್ರೈಲರ್ ಬಾರಿ ಪ್ರಶಂಸೆಗೆ ಪಾತ್ರವಾಯಿತು. 17 ಮಾರ್ಚ್ 2017ಕ್ಕೆ ಚಿತ್ರ ಬಿಡುಗಡೆಯಾಯಿತು. == ==